ಅಭಿಪ್ರಾಯ / ಸಲಹೆಗಳು

ಇತಿಹಾಸ

 

ಮೈಸೂರು ಸಂಸ್ಥಾನವು ದಕ್ಷಿಣ ಏಷಿಯಾದಲ್ಲಿಯೇ ಪ್ರಪ್ರಥಮ ಬಾರಿಗೆ 1902 ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಟಾದನಾ ಕಾರ್ಯವನ್ನು ವಾಣಿಜ್ಯ ಉದ್ದೇಶಕ್ಕಾಗಿ ಸ್ಥಾಪಿಸಿತು. ಮುಂದುವರೆದ ದೇಶಗಳು ಈ ಕ್ಷೇತ್ರದಲ್ಲಿ ಶೈಶವಸ್ಥೆಯಲ್ಲಿದ್ದಾಗಲೇ ಪ್ರಪಂಚದಲ್ಲೇ ಅತ್ಯಂತ ಉದ್ದದ ಹೈ ವೋಲ್ಟೇಜ್‍ನ ಮಾರ್ಗವನ್ನು ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿ (ಕೆ.ಜಿ.ಎಫ್) ಯವರೆಗೆ ನಿರ್ಮಿಸಲಾಯಿತು.  

ಶಿವನಸಮುದ್ರದ ಪವರ್ ಹೌಸ್‌ನ ಉತ್ಟಾದನಾ ಸಾಮರ್ಥ್ಯವು ಹಂತ ಹಂತವಾಗಿ 42 ಮೆಗಾ ವ್ಯಾಟ್‍ಗಳಿಗೆ ಹೆಚ್ಚಾಯಿತು ವಿದ್ಯುತ್ತಿನ ಹೆಚ್ಚಿನ ಬೇಡಿಕೆಯನ್ನು ಪೂರೈಸಲು, 17.2 ಮೆಗಾ ವ್ಯಾಟ್‍ನ ಸ್ಥಾಪಿತ ಸಾಮರ್ಥ್ಯದೊಂದಿಗೆ ಶಿಂಷಾ ಜನರೇಟಿಂಗ್ ಸ್ಟೇಷನ್ 1938 ರಲ್ಲಿ ಕಾರ್ಯಾರಂಭಗೊಂಡಿತು. ಕೈಗಾರಿಕೆಗಳು ಮತ್ತು ಗ್ರಾಮೀಣ ವಿದ್ಯುದೀಕರಣಕ್ಕಾಗಿ ವಿದ್ಯುತ್ತಿನ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಉತ್ಪಾದನೆ ಕಡ್ಡಾಯವಾಯಿತು, ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರದಿಂದ ಮೊದಲ ಹಂತ 72 ಮೆಗಾ ವ್ಯಾಟ್, ಎರಡನೇ ಹಂತ ಮೆಗಾ ವ್ಯಾಟ್ 1948 ಮತ್ತು 1952 ರ ಅವಧಿಯಲ್ಲಿ ಕ್ರಮವಾಗಿ ಕಾರ್ಯಾರಂಭಗೊಳಿಸಲಾಯಿತು.

ತರುವಾಯು 33.2 ಮೆ.ವ್ಯಾ. ಸಾಮರ್ಥ್ಯದ ಅಳವಡಿಕೆಯ ಸಾಮರ್ಥ್ಯವನ್ನು ಹೊಂದಿರುವ ಭದ್ರಾ ಪ್ರಾಜೆಕ್ಟ್ ಮತ್ತು ಮುನಿರಾಬಾದ್‍ನಲ್ಲಿ 27 ಮೆಗಾ ವ್ಯಾಟ್ ಅನ್ನು ಅಳವಡಿಕೆಯ ಸಾಮರ್ಥ್ಯವನ್ನು ಹೊಂದಿರುವ ತುಂಗಭದ್ರಾ ಲೆಪ್ಟ್ ಬ್ಯಾಂಕ್ ಪವರ್ ಹೌಸ್‍ನ್ನು ಅನುಕ್ರಮವಾಗಿ 1964 ಮತ್ತು 1965ರ ಅವಧಿಯಲ್ಲಿ ನಿಯೋಜಿಸಲಾಯಿತು.

ಕಡಿಮೆ ಬೆಲೆಯ ವಿದ್ಯುಚ್ಛಕ್ತಿ ಮತ್ತು ಇತರ ಮೂಲಭೂತ ಸೌಕರ್ಯಗಳ ಲಭ್ಯತೆಯೊಂದಿಗೆ ಕರ್ನಾಟಕ ರಾಜ್ಯವು ಕೈಗಾರಿಕಾ ಚಟುವಟಿಕೆಯಲ್ಲಿ ಅನುಕೂಲಕರವಾಗಿತ್ತು, ಶರಾವತಿ ಕಣಿವೆಯಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸಲು ಇದು ಅಗತ್ಯವಾಯಿತು. 89.1 ಮೆಗಾ ವ್ಯಾಟ್‍ಗಳ ಮೊದಲ ಘಟಕವನ್ನು 1964 ರಲ್ಲಿ ನಿಯೋಜಿಸಲಾಯಿತು ಮತ್ತು 1977ರಲ್ಲಿ ಪೂರ್ಣಗೊಂಡಿತ್ತು.

ವಿದ್ಯುತ್ ಬೇಡಿಕೆಯು ಅರವತ್ತರ ದಶಕದ ಮಧ್ಯಭಾಗದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಸಾರ್ವಜನಿಕ ವಲಯ ಮತ್ತು ಖಾಸಗಿ ಕೈಗಾರಿಕೆಗಳ ಸ್ಥಾಪನೆಯೊಂದಿಗೆ ಒಂದು ಅದ್ಬುತವಾದ ಏರಿಕೆ ಕಂಡಿತು, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯು ಸಂಪೂರ್ಣವಾಗಿ ಮುಂಗಾರಿನ ಮೇಲೆ ವಾಡಿಕೆಯಂತೆ ಅವಲಂಬಿತವಾಗಿತ್ತು ರಾಯಚೂರಿನಲ್ಲಿ ರಾಜ್ಯ ಸರ್ಕಾರ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದೆ. ರಾಯಚೂರು ವಿದ್ಯುತ್ ಸ್ಥಾವರದ ಪ್ರಸ್ತುತ ಸ್ಥಾಪಿತ ಸಾಮರ್ಥ್ಯ 1260 ಮೆಗಾ ವ್ಯಾಟ್ ಆಗಿದೆ.

 ರಾಜ್ಯದ ವಿದ್ಯುತ್ ಸಂಪನ್ಮೂಲಗಳನ್ನು ಉನ್ನತೀಕರಿಸಲು ಕಾಳಿನದಿ ಯೋಜನೆಯಡಿಯಲ್ಲಿ ನಾಗಝರಿ ವಿದ್ಯುತ್ ಸ್ಥಾವರದಲ್ಲಿ 810 ಮೆಗಾ ವ್ಯಾಟ್ ಸಾಮರ್ಥ್ಯ ಹಾಗೂ ಸೂಪಾ ಅಣೆಕಟ್ಟು ಪವರ್ ಹೌಸಿನಲ್ಲಿ 100 ಮೆಗಾ ವ್ಯಾಟ್ ವಿದ್ಯುತ್ ಸಾಮರ್ಥ್ಯದ 4112 ಎಂ.ಕೆ.ಡಬ್ಲೂ.ಹೆಚ್ ನಿಯೋಜಿಸಲಾಯಿತು.

 ಪ್ರಸರಣ ಮತ್ತು ವಿತರಣಾ ವ್ಯವಸ್ಥೆಯು ರಾಜ್ಯ ಸರ್ಕಾರ (ಹಿಂದಿನ ಮೈಸೂರು) ದ ನಿಯಂತ್ರಣದಲ್ಲಿ 1957 ರವರೆಗೆ ಇತ್ತು, 1957ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಸ್ಥಾಪನೆಯಾಯಿತು ಮತ್ತು ಖಾಸಗಿ ವಿತರಣಾ ಕಂಪನಿಗಳು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯೊಂದಿಗೆ ವಿಲೀನಗೊಂಡಿತು.

 1986 ರವರೆಗೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಲಾಭದಾಯಕ ಸಂಸ್ಥೆಯಾಗಿತ್ತು. ಆದಾಗ್ಯೂ ಮುಂದಿನ ವರ್ಷಗಳಲ್ಲಿ ದೇಶದ ಇತರ ರಾಜ್ಯ ವಿದ್ಯುಚ್ಚಕ್ತಿ ಮಂಡಳಿಗಳಂತೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಸಹ ನಷ್ಟ ಉಂಟಾಯಿತು , ಮುಖ್ಯವಾಗಿ ಕೃಷಿ ಬಳಕೆಯ ಹೆಚ್ಚಳ ಮತ್ತು ಸರ್ಕಾರದ ಸಾಮಾಜಿಕ ಆರ್ಥಿಕ ನೀತಿಗಳನ್ನು ಅನುಷ್ಠಾನಗೊಳಿಸುವುದರಿಂದಾಗಿ ವಿದ್ಯುತ್ ಕ್ಷೇತ್ರದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತು.

ವಿದ್ಯುತ್ ಕ್ಷೇತ್ರದ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಭಾರತ ಸರ್ಕಾರವು ಪ್ರಾರಂಭಿಸಿದ ಸುಧಾರಣೆಗಳೊಂದಿಗೆ ಕರ್ನಾಟಕ ಸರ್ಕಾರ ವಿದ್ಯುತ್ ವಲಯದಲ್ಲಿ ಮೂಲಭೂತ ಸುಧಾರಣೆಗಳನ್ನು ಪ್ರಸ್ತಾಪಿಸುವ ಒಂದು ಸಾಮಾನ್ಯ ನೀತಿಯೊಂದಿಗೆ ಹೊರಬಂದಿತು. ಅಂತೆಯೇ ಕರ್ನಾಟಕ ಮಸೂದೆ, ಕರ್ನಾಟಕ ವಿದ್ಯುತ್ ಸುಧಾರಣಾ ಕಾಯಿದೆಯನ್ನು ಕರ್ನಾಟಕ ಶಾಸಕಾಂಗವು ಅಂಗೀಕರಿಸಿತು. ಕರ್ನಾಟಕ ವಿದ್ಯುತ್ ಸುಧಾರಣಾ ಮಸೂದೆಯ ಕಡ್ಡಾಯವಾಗಿ ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿಯನ್ನು ನಿಗಮೀಕರಿಸಲು ನಿರ್ದರಿಸಿತು. ದಿನಾಂಕ: 01.08.1999 ರಿಂದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯನ್ನು ವಿಭಜಿಸಿ ಕವಿಪ್ರನಿನಿ ಹಾಗೂ ವಿಶ್ವೇಶ್ವರಯ್ಯ ವಿದ್ಯುತ್ ನಿಗಮ ನಿಯಮಿತ (ವಿವಿಎನ್‍ಎಲ್) ಎಂದು ಪುನರ್ ರಚಿಸಿ ಪ್ರಸರಣ, ವಿತರಣೆಯ ಜವಾಬ್ದಾರಿಯನ್ನು ಕವಿಪ್ರನಿನಿಗೆ ವಹಿಸಲಾಯಿತು.

ಇತ್ತೀಚಿನ ನವೀಕರಣ​ : 30-04-2020 11:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080