ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಕವಿಪ್ರನಿನಿಯು ಕಂಪನಿ ಕಾಯ್ದೆ 1956ರ ಅಡಿಯಲ್ಲಿ ನೋಂದಾಯಿತ ಸಂಸ್ಥೆಯಾಗಿದ್ದು ದಿನಾಂಕ: 18.07.1999 ರಂದು ಸಂಯೋಜಿಸಲ್ಪಟ್ಟಿತ್ತು ಮತ್ತು ಕರ್ನಾಟಕ ಸರ್ಕಾರವು 2182.32 ಕೋಟಿ ರೂಗಳ ಅಧಿಕೃತ ಪಾಲು ಬಂಡವಾಳದೊಂದಿಗೆ ಸಂಪೂರ್ಣ ಒಡೆತನದಲ್ಲಿದೆ. ಕವಿಪ್ರನಿನಿಯು ದಿನಾಂಕ: 01.06.1999 ರಂದು ರಚನೆಗೊಂಡಿದ್ದು ಈ ಹಿಂದೆ ಕವಿಮಂಯಲ್ಲಿದ್ದ ಪ್ರಸರಣ ಮತ್ತು ವಿತರಣೆ ಕಾರ್ಯಗಳನ್ನು ಬೇರ್ಪಡಿಸಲಾಯಿತು.

 

ಕವಿಪ್ರನಿನಿಯ ನಿಗಮ ಕಛೇರಿಯಲ್ಲಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ನೇತೃತ್ವ ವಹಿಸುತ್ತಾರೆ. ಅವರಿಗೆ ನಾಲ್ಕು ಕ್ರಿಯಾತ್ಮಕ ನಿರ್ದೇಶಕರು ಸಹಾಯ ಮಾಡುತ್ತಾರೆ. ಕವಿಪ್ರನಿನಿಯು ಗರಿಷ್ಠ 12 ನಿರ್ದೇಶಕರನ್ನು ಹೊಂದಿದೆ.

 

ಕವಿಪ್ರನಿನಿಯು ಮುಖ್ಯವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ವಿದ್ಯುತ್ ಪ್ರಸರಣ ಕಾರ್ಯಚಟುವಟಿಕೆಯೊಂದಿಗೆ ಪ್ರಸರಣ ಮಾರ್ಗಗಳ ನಿರ್ಮಾಣ, ವಿದ್ಯುತ್ ಕೇಂದ್ರಗಳ ನಿರ್ಮಾಣ ಮತ್ತು 400/220/110/66 ಕೆ.ವಿ ಉಪಕೇಂದ್ರಗಳ ನಿರ್ವಹಣೆಗೆ ಒಳಪಟ್ಟಿರುತ್ತದೆ. ಹಲವು ಹೊಸ ಮಾರ್ಗಗಳ ಮತ್ತು ಉಪಕೇಂದ್ರಗಳನ್ನು ಸೇರಿಸಲಾಗಿದೆ ಮತ್ತು ಅಸ್ತಿತ್ವದಲ್ಲಿರುವ ಉಪಕೇಂದ್ರಗಳನ್ನು ಪ್ರಸರಣ ಜಾಲದಲ್ಲಿ ಮಾರ್ಪಡಿಸಲಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಹೊರಡಿಸಿದ ಪರವಾನಗಿ ಅಡಿಯಲ್ಲಿ ಅದು ಕಾರ್ಯನಿರ್ವಹಿಸುತ್ತಿದೆ.

 

ಕವಿಪ್ರನಿನಿಯಲ್ಲಿ ಒಟ್ಟು 09 ಸಂಖ್ಯೆಯ 400 ಕೆವಿ ಉಪಕೇಂದ್ರ, 131 ಸಂಖ್ಯೆಯ 220 ಕೆವಿ ಉಪಕೇಂದ್ರ, 485 ಸಂಖ್ಯೆಯ 110 ಕೆವಿ ಉಪಕೇಂದ್ರ ಹಾಗೂ 714 ಸಂಖ್ಯೆಯ 66 ಕೆವಿ ಉಪಕೇಂದ್ರಗಳಿವೆ, ದಿನಾಂಕ: 31.03.2023 ಕ್ಕೆ ಒಟ್ಟು ಪ್ರಸರಣ ಮಾರ್ಗ 41913.274 ಸ.ಕಿ.ಮೀ ಆಗಿದೆ.

 

ಕವಿಪ್ರನಿನಿಯು ಈ ಕೆಳಕಂಡ ಅಂಗಗಳನ್ನು ಒಳಗೊಂಡಿದೆ.

   • ನಿಗಮ ಕಾರ್ಯಾಲಯ ಕಛೇರಿ, ಕಾವೇರಿ ಭವನ,
   • ಆರು ಪ್ರಸರಣವಲಯಗಳು ಹಾಗೂ ಪ್ರತಿ ವಲಯಕ್ಕೆ ಮುಖ್ಯ ಇಂಜಿನಿಯರ್ ಮುಖ್ಯಸ್ಥರಾಗಿರುತ್ತಾರೆ.
   • ರಾಜ್ಯ ವಿದ್ಯುತ್ ರವಾನೆ ಕೇಂದ್ರ (ಎಸ್.ಎಲ್.ಡಿ.ಸಿ.)
   • ಸ್ಕಾಡ (ಮೇಲ್ವಿಚಾರಣ ನಿಯಂತ್ರಣ ಮತ್ತು ದತ್ತಾಂಶ ಸಂಗ್ರಹಿಸುವಿಕೆ)

2021-22 ರ ಕವಿಪ್ರನಿನಿಯ ವಾರ್ಷಿಕ ವಹಿವಾಟು ರೂ. 4380(ತಾತ್ಕಾಲಿಕ) ಕೋಟಿಗಳಷ್ಟಾಗಿದೆ.

 

ಕವಿಪ್ರನಿನಿ ಬೇರ್ಪಡುವಿಕೆ (ಅನ್‍ಬಂಡಲ್ಡ್)

 

ಸರ್ಕಾರದ ಆದೇಶ ಸಂಖ್ಯೆ 69 ಬಿಎಸ್‍ಆರ್ 2001, ಬೆಂಗಳೂರು ದಿನಾಂಕ: 15.02.2002 ರಂತೆ ಕವಿಪ್ರನಿನಿಯು ನಾಲ್ಕು ವಿತರಣಾ ಕಂಪನಿಗಳಾಗಿ ಬೇರ್ಪಟ್ಟಿತು.

 

ಇದಕ್ಕೆ ಸಂಬಂಧಿಸಿದಂತೆ ವಿದ್ಯುಚ್ಛಕ್ತಿ ವಿತರಣೆ ಕವಿಪ್ರನಿನಿಯಿಂದ ಸಂಪೂರ್ಣವಾಗಿ ಬೇರ್ಪಟ್ಟಿತು. ಹಾಗೂ ಕವಿಪ್ರನಿನಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ವಿದ್ಯುತ್ ಪ್ರಸರಣ ಕಾರ್ಯ ಹಾಗೂ 66 ಕೆವಿ ಮತ್ತು ಹೆಚ್ಚು ಇರುವ ವಿದ್ಯುತ್ ಕೇಂದ್ರಗಳ ನಿರ್ಮಾಣ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತದೆ.

 

ದಿನಾಂಕ: 30.04.2002ರಲ್ಲಿ ನೊಂದಾಯಿಸಲ್ಪಟ್ಟ ನಾಲ್ಕು ಹೊಸ ಸ್ವತಂತ್ರ ವಿತರಣಾ ಕಂಪನಿಗಳು ಬೆವಿಕಂ, ಮಂವಿಕಂ, ಹುವಿಕಂ ಹಾಗೂ ಗುವಿಕಂ ಈ ಕಂಪನಿಗಳು ತಮ್ಮ ಕಾರ್ಯವನ್ನು ದಿನಾಂಕ: 01.06.2002 ರಿಂದ ನಿರ್ವಹಿಸುವ ಹಾಗೂ ಈ ಕಂಪನಿಗಳು ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ವಿದ್ಯುತ್ ವಿತರಣೆಯನ್ನು ಮಾಡುವ ಜವಾಬ್ದಾರಿ ಹೊಂದಿವೆ.

 

ಕರ್ನಾಟಕ ಸರ್ಕಾರದ ಆದೇಶ ಇಎನ್ 08 ಪಿಎನ್‍ಆರ್ 2005/262 ರಂತೆ ಐದನೇ ವಿತರಣಾ ಕಂಪನಿ ಚಾ.ವಿ.ಸ.ನಿ (ಸೆಸ್ಕ್) ಕಂಪನಿ ಕಾಯ್ದೆ 1956ರಡಿಯಲ್ಲಿ ಸಂಘಟಿತವಾದ ನಿಗಮವಾಗಿದ್ದು ಐದು ಜಿಲ್ಲೆಗಳಿಗೆ ವಿತರಣೆ ಮತ್ತು ವಿದ್ಯುಚ್ಛಕ್ತಿ ಪೂರೈಕೆಗೆ ಸಂಬಂಧಿಸಿದಂತೆ ಕವಿಪ್ರನಿನಿ ಹಾಗೂ ಮವಿಕಂ ಗೆ ಉತ್ತರಾಧಿಕಾರಿಯಾಗಿದೆ.

 

ಕಂಪನಿ ಕಾಯ್ದೆ 1956ರಡಿಯಲ್ಲಿ 20.08.2007 ರಂದು ಪಿಸಿಕೆಎಲ್ ಅನ್ನು ಸಂಘಟಿಸಲಾಯಿತು ಮತ್ತು ಅದರ ವ್ಯವಹಾರ ಕಾರ್ಯಾಚರಣೆಗಳು 16.10.2007 ರಿಂದ ಜಾರಿಗೆ ಬಂದವು ಪಿಸಿಕೆಎಲ್ ಸಾಮರ್ಥ್ಯದ ಸೇರ್ಪಡೆಗೆ ಮತ್ತು ವಿದ್ಯುತ್ ಕಂಪನಿ ಪರವಾಗಿ ಅಧಿಕಾರಿಗಳನ್ನು ಪಡೆದು ವಿವಿಧ ಮೂಲಗಳಿಂದ  ವಿದ್ಯಚ್ಛಕ್ತಿ ವಿನಿಮಯ, ಬ್ಯಾಂಕಿಂಗ್ (SWAP) ಮತ್ತು ದ್ವಿಪಕ್ಷೀಯ ವಹಿವಾಟುಗಳುಗಳನ್ನು ನಡೆಸುತ್ತಿದೆ. ಪಿಸಿಕೆಎಲ್ ಇತರ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಏಜೆನ್ಸಿಗಳೊಂದಿಗೆ ವಿದ್ಯುತ್ ಸಂಬಂಧಿತ ವಿಷಯಗಳ ಮೇಲೆ ವ್ಯವಹಾರ ನಡೆಸುತ್ತದೆ.

ಇತ್ತೀಚಿನ ನವೀಕರಣ​ : 29-05-2023 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080